ಸುಗ್ಗನಹಳ್ಳಿ ರುದ್ರಮೂತಿ೯ ಶಾಸ್ತ್ರಿ ಗಳು ಅಧುನಿಕ ಕನ್ನಡ ಸಾಹಿತ್ಯ ಲೇಖಕರು, ಕಾದಂಬರಿಕಾರರು, ಚಿತ್ರಕತೆ ಸಂಭಾಷಣೆಕಾರು ಮತ್ತು ಗೀತೆ ರಚನಗಾರರು. == ಜೀವನ == ಸು ರುದ್ರಮೂರ್ತಿ ಶಾಸ್ತ್ರಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೋಕಿನ ಸುಗ್ಗನಹಳ್ಳಿಯಲ್ಲಿ. ತಂದೆ ಎಸ ಏನ್ ಶಿವರುದ್ರಯ್ಯ, ತಾಯಿ ಶಿವಗಂಗಮ್ಮ, ಪ್ರಾಥಮಿಕ ಶಿಕ್ಷಣ ಸುಗ್ಗನಹಳ್ಳಿ, ಪ್ರೌಡ ಶಿಕ್ಷಣ ರಾಮನಗರ ದಲ್ಲಿ, ಎಂ ಎ ಕನ್ನಡ ಪದವಿ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಪಡೆದಿದ್ದಾರೆ. ರುದ್ರಮೂರ್ತಿ ಯವರು ೧೯೧೯೭೨ ರಿಂದ ೧೯೮೨ ರವರೆಗೆ ರೇಣುಕಾಚಾರ್ಯ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. == ಕೃತಿಗಳು == === ಕವನ ಸಂಕಲನ === ಭಾವ ಲಹರಿ, ಪರಿ, ಅಂತರಂಗ ಬಹಿರಂಗ , ಚಿತ್ರಕಲ್ಪನೆ, ರಾಗ, ನಾದಗೀತೆಗಳು, ನಾದರೂಪಕ ಕವನ ಸಂಕಲನ, ಪ್ರಾಸ-ಪ್ರಯಾಸ, ಕೆಂಪನ ವಚನಗಳು, ಅಲ್ಪಜ್ನ್ನ ವಚನಗಳು, ಕೆಂಪ ರಾಮಾಯಣಂ, ಕೆಮ್ಪಭಾರತಮ್ === ಕಾದಂಬರಿಗಳು === ಚಾಣಕ್ಯ ಧರ್ಮ ಚಕ್ರವರ್ತಿ ಅಶೋಕ ಸರ್ವಜ್ಞ ಔರಂಗಜೆಬ ಚಾರುದತ್ತ ರಾಧಾ ರಜನಿ ಬಣ್ಣದಹಕ್ಕಿ ಮಣ್ಣಿನ ಋಣ ಸ್ವಪ್ನ ಗಾನ ಕುಮಾರ ರಾಮ === ಚಲನಚಿತ್ರ ಮತ್ತು ಟಿ.ವಿ. ಧಾರಾವಾಹಿಯಾಗಿರುವ ಕೃತಿಗಳು === ಗಂಡುಗಲಿ ಕುಮಾರರಾಮ ಅಣ್ಣ ಬಸವಣ್ಣ ವೆಂಕಟೇಶ ಮಹಿಮೆ ನಳದಮಯಂತಿ ವಿಕ್ರಮ ಮತ್ತು ಬೇತಾಳ == ಉಲ್ಲೇಖಗಳು ==